ಜ್ಞಾನದೇವ
	1275-1296. ಮಹಾರಾಷ್ಟ್ರದ ಸುಪ್ರಸಿದ್ಧ ಸಂತ. ಅಲ್ಲಮಪ್ರಭುವಿನಂತೆ ಮಹಾ ಅನುಭಾವಿ. ತಂದೆ ವಿಟ್ಠಲಪಂತ ಗೋದಾವರಿ ನದೀತೀರದಲ್ಲಿನ ಆಪೇಗಾವ ಎಂಬ ಊರಿನವ. ತಾಯಿ ರುಕ್ಮಿಣಿಬಾಯಿ ಪುಣೆ ಹತ್ತಿರದ ಅಳಂದಿ ಗ್ರಾಮದವಳು. ಅವರಿಗೆ ನಾಲ್ಕು ಮಕ್ಕಳು-ನಿವೃತ್ತಿನಾಥ e್ಞÁನದೇವ, ಸೋಪಾನ, ಮುಕ್ತಾಬಾಯಿ. ಅಣ್ಣ ನಿವೃತ್ತ್ತಿನಾಥನೇ e್ಞÁನದೇವನಿಗೆ ಗುರುವಾಗಿ ಅನುಗ್ರಹ ಮಾಡಿದ. ಇವರದು ನಾಥ ಸಂಪ್ರದಾಯ. ಮನೆತನದಲ್ಲಿ ಪಂಢರಪುರದ ವಿಟ್ಠಲನ ಭಕ್ತಿ ನೆಲೆಗೊಂಡಿತ್ತು.

	ಭಗವದ್ಗೀತೆಗೆ e್ಞÁನೇಶ್ವರಿ ಎಂದು ಹೆಸರಾದ ಭಾವಾರ್ಥದೀಪಿಕೆ ಎಂಬ ಭಾಷ್ಯವನ್ನು ಬರೆದು, ವಾರಕರಿಪಂಥಕ್ಕೆ e್ಞÁನೇಶ್ವರ ಆಚಾರ್ಯಪುರುಷನಾಗಿದ್ದಾನೆ. ಅಭಂಗಗಳು, ಅನುಭವಾಮೃತ, ಚಾಂಗದೇವ ಪಾಸಷ್ಟಿ ಮೊದಲಾದ ಕೃತಿಗಳನ್ನೂ ಈತ ರಚಿಸಿದ್ದಾನೆ. ಇವನ e್ಞÁನೇಶ್ವರಿ ಟೀಕೆಯನ್ನು ಉದ್ಧಾರ ಮಾಡಿದವ ಸಾಧು ಏಕನಾಥ. ಭಕ್ತ ತುಕಾರಾಮ e್ಞÁನದೇವ ಹಾಕಿದ ಅಡಿಗಲ್ಲಿನ ಗುಡಿಗೆ ಕಳಸವಿಟ್ಟ ಎಂದು ಸಂತರು ಕೀರ್ತಿಸಿದ್ದಾರೆ. e್ಞÁನದೇವನ ಕೆಲಕೃತಿಗಳು ಇತ್ತೀಚೆಗೆ ಕನ್ನಡದಲ್ಲಿ ಅನುವಾದಿತವಾಗಿವೆ.

	e್ಞÁನೇಶ್ವರ ಪೂರ್ಣಶಂಭುವಿನ ಶರಣ: ಆದಿಪುರುಷನ ಭಕ್ತ. ಇವನ ಸಮಾಧಿ ಅಳಂದಿಯಲ್ಲಿ ಅಜ್ಞಾನ ವೃಕ್ಷದ ಬುಡಕ್ಕಿದೆ. e್ಞÁನೇಶ್ವರಿ ಮಹಾಗ್ರಂಥ. ಮರಾಠಿ ಭಾಷೆಯಲ್ಲಿ ವೇದಸಮಾನ; ಒಂಬತ್ತು ಸಾವಿರದ ಒಂಬತ್ತು ಓವಿಗಳನ್ನು ಇದು ಒಳಗೊಂಡಿದೆ. ಅಂದು ಮತಧರ್ಮದಲ್ಲಿ ಕೆಲವರಿಗೇ ಮೀಸಲಾಗಿದ್ದ ಸಾಂಪ್ರದಾಯಿಕ ಪದ್ಧತಿಗಳನ್ನು ಮೀರಿ, ಸರಳವಾದ ಆಧ್ಯಾತ್ಮಿಕ ಬೋಧನೆಗಳನ್ನೂ ಭಕ್ತಿಮಾರ್ಗವನ್ನೂ ಮಾತೃಭಾಷೆಯಾದ ಮರಾಠಿಯಲ್ಲಿ ಜನಸಾಮಾನ್ಯರಿಗೆ ವೇದ್ಯವಾಗುವಂತೆ ಮಾಡಿರುವ ಪ್ರಯತ್ನದ ಫಲವನ್ನಿಲ್ಲಿ ಕಾಣಬಹುದು. ಹಿಂದೂ ದರ್ಶನ ಹಾಗೂ ವಿಹಿತ ಯಾಗಕರ್ಮಗಳಿಂದ ಹಿಡಿದು ಪ್ರಕೃತಿಸೌಂದರ್ಯ, ಜನಪದ ಜೀವನವಿವರಣೆಗಳವರೆಗೆ, ಭಕ್ತಿಯ ಪ್ರೇರಣೆಯಿಂದ ಹಿಡಿದು ಪುರಾಣ ಪುಣ್ಯಕಥೆಗಳವರೆಗೆ ವ್ಯಾಪ್ತಿಯುಳ್ಳದ್ದಾಗಿರುವುದರಿಂದ ಮತ್ತು ಸಂಸ್ಕøತ-ಮರಾಠಿ ಭಾಷೆಗಳ ಮನೋಜ್ಞ ಸಂಮಿಶ್ರಣಯುಕ್ತವಾದ್ದರಿಂದ ಇದು ವಿದ್ವಾಂಸರಿಗೂ ಜನಸಾಮಾನ್ಯರಿಗೂ ತುಂಬ ಆದರಣಿಯವಾಗಿದೆ ಅಲ್ಲದೆ, ಒಂದು ವಿರಚಿತ ಗ್ರಂಥದಂತೆ ಕಂಡರೂ e್ಞÁನದೇವ ತನ್ನೆದುರಿಗಿದ್ದ ಎಲ್ಲ ದರ್ಜೆಯ ಭಕ್ತಾದಿಗಳಿಗೆ ಕರ್ಮ, e್ಞÁನ, ಭಕ್ತಿ, ಪ್ರವೃತ್ತಿ, ನಿವೃತ್ತಿ ಮುಂತಾದವನ್ನು ಕುರಿತು ಮಾಡಿದ ಜೀವಂತ ಬೋಧನೆಯೆಂದು ಜನ ಇದನ್ನು ಪ್ರಶಂಸೆ ಮಾಡಿದ್ದಾರೆ. ಮರಾಠಿ ಭಾಷೆ ಮತ್ತು ಸಾಹಿತ್ಯ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಈ ಗ್ರಂಥ ಸಹಾಯಕವಾಗಿದೆ.

	ಕೃತಿ ಛಂದೋಬದ್ಧವಾಗಿದ್ದು ಕೀರ್ತನೆಯ ರೂಪದಲ್ಲಿದೆ. ಛಂದಸ್ಸಿನ ಕ್ರಮದಲ್ಲಿ ಸ್ವಾತಂತ್ರ್ಯಕ್ಕೆ ಅವಕಾಶವಿರುವುದರಿಂದ ವಿಭಿನ್ನ ವಿಷಯಗಳ ಪ್ರತಿಪಾದನೆಗೆ ಸೌಲಭ್ಯವುಂಟಾಗಿದೆ. ಇದನ್ನು ಧರ್ಮಕೀರ್ತನೆಯೆಂದೂ ಟೀಕೆಯೆಂದೂ ಗ್ರಂಥಭಾಗದಲ್ಲಿ ನಿರ್ದೇಶಿಸಲಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ತಿಳಿಯುವ ರೀತಿಯಲ್ಲಿ ಮಾಡಿರುವ ಧಾರ್ಮಿಕ ಬೋಧನೆ ಇದರ ವೈಶಿಷ್ಟ್ಯವಾದ್ದರಿಂದ ಇದನ್ನು ಟೀಕೆ ಎನ್ನುವುದಕ್ಕಿಂತಲೂ ಧರ್ಮಕೀರ್ತನೆಯೆಂದು ಕರೆಯುವುದೇ ಸೂಕ್ತವೆಂಬುದು ವಿದ್ವಾಂಸರ ಮತ. ಇದರಲ್ಲಿ ಅದ್ವೈತದರ್ಶನತತ್ತ್ವಗಳನ್ನು ಒತ್ತಿಹೇಳಲಾಗಿದೆ. ವಿಶ್ವಾತ್ಮಕದೇವ ದುರಿತದ ತಿಮಿರ ಹರಿಯುವಂತೆ ಸ್ವಧರ್ಮಸೂರ್ಯನನ್ನು ಬೆಳಗಿಸಲಿ, ಜೀವ ಜೀವಗಳಲ್ಲಿ ಮೈತ್ರಿ ನೆಲೆಸಲಿ-ಎಂದು ಭಗವಂತನಲ್ಲಿ ಗ್ರಂಥಕರ್ತೃ ವರ ಬೇಡಿಕೊಂಡಿದ್ದಾನೆ. ಪ್ರಸಿದ್ಧ ವಿಮರ್ಶಕರಾದ ನಿಂಬಾಳದ ರಾನಡೆ e್ಞÁನದೇವನನ್ನು ಬುದ್ಧಿಯೋಗದ ಅನುಭಾವಿ ಎಂದು ಬಣ್ಣಿಸಿದ್ದಾರೆ.								(ಡಿ.ಆರ್.ಬಿ.ಇ.; ಬಿ.ಕೆ.ಎಸ್.; ಎಂ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ